ಆಶಾಡ ಮಾಸದ ಮುಖ್ಯ ದಿನಗಳು
ಆಶಾಡ - ಪೂರ್ಣಿಮಾ
ಗುರುಪೂರ್ಣಿಮಾ
ಇವತ್ತಿನ ದಿನ ಮುಂಜಾನೆ ಸ್ನಾನ ಸಂಧ್ಯಾದಿಗಳನ್ನು ಮುಗಿಸಿಕೊಂಡು ಗುರುಗಳಿದ್ದಲಿಗೆ ಹೋಗಿ ಫಲ-ತಾಂಬೂಲಾಗಳಿಂದ ಅವರನ್ನು ಏಕಾಗ್ರವಾದ ಮನಸ್ಸಿನಿಂದ ಅಭಿನಂದಿಸಿ ಬರಬೇಕು. ಇದರಿಂದ ಎಲ್ಲ ವಿಧವಾದ ಸುಖ ಸಂಪತ್ತುಗಳು ಹತ್ತಿರವಾಗುತ್ತವೆ. ಅಷ್ಟೇ ಅಲ್ಲ, ಎಲ್ಲ ಆಪತ್ತುಗಳು ದೂರವಾಗುತ್ತವೆ.
ದಕ್ಷಿಣಾಯನ ಪ್ರಾರಂಭ
ಇದು ಸಾಮಾನ್ಯವಾಗಿ ಆಶಾಡ ಮಾಸದಲ್ಲಿ ಬರುತ್ತದೆ. ಈ ದಿನ ಉತ್ತರಾಮ ಮುಗಿದು ದಕ್ಷಿಣಾಯನ ಪ್ರಾರಂಭವಾಗುವ ದಿನ. ಎರಡೂ ಆಯನಗಳ ಸಂಗಮ. ಈ ಎರಡರ ಪರ್ವಕಾಲದಲ್ಲಿ ಸ್ನಾನ, ದಾನ, ಹೋಮ ಇತ್ಯಾದಿಗಳನ್ನು ಮಾಡಬೇಕು.
ಭಾನುವಾರ, ಜೂನ್ 28, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ