ಸೋಮವಾರ, ಏಪ್ರಿಲ್ 27, 2009

ಅಕ್ಷಯ ತೃತಿಯಾ ಮಹತ್ವ

ಅಕ್ಷಯ ತೃತಿಯಾ

ವೈಶಾಖ ಶುಕ್ಲ ತೃತಿಯಾ, ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ ತೈತಿಲಕರಣ.

ಅಕ್ಷಯ ತೃತಿಯಾ ಇದು ಕೃತಯುಗದ ಮೊದಲನೆಯ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನದಲ್ಲಿ ಮಾಡಿದ ಎಲ್ಲ ಕರ್ಮಗಳು ಕೂಡ ಅಕ್ಷಯವಾಗುತ್ತದೆ ಎಂದು ಶಾಸ್ತ್ರ ಹೇಳಿದೆ. ಇದು ವರ್ಷಕ್ಕೆ ಒಂದು ಬಾರಿ ಬರುವ ದಿನ. ಇವತ್ತು ಅದಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡಬೇಕು. ಏಕೆಂದರೆ ಆ ದಿನ ಮಾಡಿದ ಕೆಟ್ಟ ಕೆಸಲಗಳು ಅವು ವರ್ಷ ಪೂರ್ತಿ ಮುಂದು ವರೆಯುತ್ತವೆ. ವಿಶೇಷವಾಗಿ ಇವತ್ತು ಗಂಗಾಸ್ನಾನ, ತೀರ್ಥದರ್ಶನ, ಹೋಮ-ಹವನಗಳನ್ನು ಮಾಡುವುದಿದೆ. ಅಕ್ಕಿಯ ದಾನ ಕೂಡ ಮಾಡಬೇಕು.

"ಯಃ ಪಶ್ಯತಿ ತೃತಿಯಾಯಾಂ ಕೃಷ್ಣಂ ಚಂದನ ಭೂಷಿತಮ
ವೈಶಾಖಸ್ಯ ನೀತೇ ಪಕ್ಷೇಸಯಾತ್ಯಂಚ್ಯಚ್ಯುತ ಮಂದಿರಂ"

ಅರ್ಥ - ಶ್ರೀ ಕೃಷ್ಣನನ್ನು ಗಂಧದಿದಂದ ಪೂರ್ತಿಯಾಗಿ ಅಲಂಕಾರ ಮಾಡಿ ಆರಾಧಿಸಿದರೆ ವೈಕುಂಠ ಲೋಕ ಪ್ರಾಪ್ತಿಯಾಗುಗವುದು.

ಅಕ್ಷಯ ತೃತಿಯಾ ದಿನ ಅಲ್ಪ ಜಪ, ದಾನ, ಅಧ್ಯಯನ ಅಕ್ಷಯವಾಗಿ ಪರಿಣಮಿಸುವುದು. ಈ ದಿನಕ್ಕೆ ರೋಹಿಣಿ ನಕ್ಷತ್ರವು ಹಾಗೂ ಬುಧವಾರ ಮಹಾಪುಣ್ಯಕರವು. ಈ ದಿನವು ಮಹಾ ಪುಣ್ಯ ಮುಹೂರ್ತದಲ್ಲಿ ಒಂದಾಗಿದೆ. ಅವತ್ತು ಎಲ್ಲ ವಿಧವಾದ ಕಾರ್ಯಗಳನ್ನು ಆರಂಭಿಸಬಹುದು. ವಿಶೇಷವಾಗಿ ಜಲಕುಂಭ ದಾನವನ್ನು ಮಾಡಬೇಕು. (ಇದರ ಕಾರಣ ಮತ್ತು ಮಹತ್ವ ಅದಷ್ಚು ಬೇಗ ಪ್ರಕಟಿಸಲಾಗುತ್ತದೆ)

ವೈಶಾಖ ಮಾಸದ ಮಹತ್ವ

ವೈಶಾಖ ಮಾಸದ ಮಹತ್ವ

ಈ ಮಾಸದಲ್ಲಿ ಮುಂಜಾನೆ ಎದ್ದು ಮಾಡುವ ಸ್ನಾನಕ್ಕೆ ಬಹಳ ಮಹತ್ವ ಇದೆ ಅನ್ನುವುದನ್ನು ಈ ಶ್ಲೋಕ ಹೇಳುತ್ತದೆ - "ವೈಶಾಖ ಸ್ನಾನ ಮಾತ್ರೇಣ ನ ಪುನಃ ಚಾರ್ಯತೆ ಭುವಿ", ಅಂದರೆ ವೈಶಾಖ ಸ್ನಾನ ಮಾತ್ರದಿಂದ ಈ ಭೂಮಿ ಮೇಲೆ ಮತ್ತೆ ನಡೆಯುವುದಿಲ್ಲಾ. ಅದಕ್ಕಾಗಿ ವೈಶಾಖ ಸ್ನಾನವು ಮೋಕ್ಷಕ್ಕೆ ಅತ್ಯಾವಶ್ಯಕ.

ಈ ಮಾಸದ ದಾನಗಳು -

ಈ ಮಾಸದಲ್ಲಿ ವಿಶೇಷವಾಗಿ ತುಂಬಿದ ಕುಂಭವನ್ನು, ಪಾದರಕ್ಷೆ, ಛತ್ರಿ, ಬಂದ ಅತಿಥಿಗಳಿಗೆ ಉತ್ತಮವಾದ ಚಾಮರ, ತಣ್ಣೀರು, ಎಳೇ ನೀರು, ಪಾನಕ ಅನ್ನ ಇವೆ ಮೊದಲಾವುಗಳನ್ನು ದಾನ ಮಾಡಬೇಕು. ಮಂಚ, ಶಯ್ಯಾ, ಚಾಪೆ, ಕಂಬಳಿ ದಾನವು ಅಪಮೃತ್ಯು ಪರಿಹಾರ, ಅಂದರೆ ಅಕಾಲದಲ್ಲಿ ಆಗುವ ಮೃತ್ಯುವಿನ ಪರಿಹಾರವೆಂದು ಹೇಳಲಾಗಿದೆ. ಉತ್ತಮವಾದ ಶುದ್ಧ ಹತ್ತಿಯ ಬಟ್ಟೆಗಳನ್ನು ದಾನ ಮಾಡಬೇಕು. ಈ ಆಚರಣೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಬುದ್ಧಿ ಇರಬೇಕಾದದ್ದು ಬಹಳ ಅವಶ್ಯಕ. ಈ ದಾನಗಳ ಹಿಂದೆ ಒಂದು ಇತಿಹಾಸವಿದೆ --

ಹಿಂದಕ್ಕೆ ಒಬ್ಬ ಶಂಖ ಬ್ರಾಹ್ಮಣ ಊರಿಂದ ಊರಿಗೆ ಹೋಗುವುದಕ್ಕಾಗಿ ಕಾಡಿನಲ್ಲಿ ಸಂಚಾರ ಮಾಡುತ್ತಿರುವಾಗ ಒಬ್ಬ ದುಷ್ಟನಾದ ವ್ಯಾಧ ಅವನನ್ನು ಹೆದರಿಸಿ. ಅವನಲ್ಲಿ ಇದ್ದ ಎಲ್ಲ ವಸ್ತುಗಳನ್ನು ಅಪಹಾರ ಮಾಡಿದನು. ಎಲ್ಲವನ್ನು ಅವನಿಂದ ಕಿತ್ತುಕೊಂಡು ನೀನಿನ್ನು ಹೊಗು ಎಂದು ಗಹರಿದನು. ಹೆದರಿದ ಬ್ರಾಹ್ಮಣ ಅಲ್ಲಿಂದ ಹೊರಟ. ಕಾಲಲ್ಲಿದ್ದ ಪಾದರಕ್ಷೆಳನ್ನು ಕೂಡ ಆ ವ್ಯಾಧ ಕಿತ್ತುಕೊಂಡಿದ್ದ. ಆ ಭಯಂಕರವಾದ ಬಿಸಿಲಿನಲ್ಲಿ ಬ್ರಾಹ್ಮಣ ಕಾಲು ಸುಡಿಸಿಕೊಳ್ಳುತ್ತಾ ಬದಳ ಕಷ್ಟದಿಂದ, ಬಹು ದೂರಕ್ಕೆ ಹೋಗುವುದನ್ನು ನೋಡಿ ಆ ವ್ಯಾಧನಿಗೆ ಕನಿಕರ ಬಂತು. ಅವನು ತನ್ನ ಹರಕು ಚಪ್ಪಲಿಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಕೊಟ್ಟಿದ್ದು ಆಯಿತು. ತೆಗೆದುಕೊಂಡು ಆ ವ್ಯಕ್ತಿ ಈತನನ್ನು ತುಂಬ ಹೃದಯದಿಂದ ಆಶೀರ್ವದಿಸಿದನು. ನೀನು ವೈಶಾಖ ಮಾಸದಲ್ಲಿ ಪಾದರಕ್ಷೆ ದಾನ ಮಾಡಿದ ನಿನಗೆ ಒಳ್ಳೆಯದಾಗಲಿ ಅಂತ ಬ್ರಾಹ್ಮಣನೆಂದನು. ಇನ್ನು ಉಳಿದ ವೈಶಾಖದ ಮಹತ್ವವನ್ನು ಕೊಂಡಾಡಿದನು. ಆ ವಿಚಾರವನ್ನು ಕೇಳಿ ವ್ಯಾಧನು ಪೂರ್ಣ ಪರಿವರ್ತನೆಗೊಂಡು, ಶಂಖ ಎಂಬ ಆ ಬ್ರಾಹ್ಮಣನಿಂದ ಅಪಹರಿಸಿದ ಎಲ್ಲ ವಸ್ತುಗಳನ್ನು ಹಿಂದಿರುಗಿಸಿದನು.

ಅಷ್ಟು ಹೊತ್ತಿನವರೆಗೆ ಕಾದಾಡುತ್ತಿರುವ ಒಂದು ಸಿಂಹ ಮತ್ತು ಆನೆ ಸುಮ್ಮನೆ ನಿಂತುಕೊಂಡಿದ್ದವು. ಆಗ ಶಂಖನು ಕೇಳಿದನು "ನಿವು ಪರಮ ವೈರಿಗಳು. ಇಲ್ಲಿ ಜೊತೆಯಲಿ ನಿಂತಿದ್ದೀರಲ್ಲಾ, ಯಾರು ನೀವು?". ಅಲ್ಲಿ ಆ ಪ್ರಾಣಿಗಳು ತಮ್ಮ ಚರಿತ್ರವನ್ನು ಹೇಳತೊಡಗಿದವು. ನಾವು ಹಿಂದಿನ ಜನ್ಮದಲ್ಲಿ ಮತಂಗ ಋಷಿಯ ಮಕ್ಕಳು. ನಮ್ಮ ತಂದೆ ವೈಶಾಖ ಮಾಸ ಪ್ರಾಪ್ತವಾದಮೇಲೆ ನಮಗೆ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಮತ್ತು ಬಿಸಿಲಿನಲ್ಲಿ ಬಂದವರಿಗೆ ಬೀಸಣಿಕೆಯಿಂದ ಬೀಸುವುದು, ಇವೇ ಮೊದಲಾದ ಆತಿಥ್ಯವನ್ನು ಮಾಡುವುದಕ್ಕೆ ಹೇಳಿದ್ದರು. ಆದರೆ ಉನ್ಮತ್ತರಾದ ನಾವು ಯಾವುದನ್ನೂ ಪಾಲಿಸಲಿಲ್ಲ. ಅದು ಅವರಿಗೆ ಬಹಳ ನೋವಾಯಿತು. ಅವರು ಅಲ್ಲೇ ನಮ್ಮನ್ನು ಶಪಿಸಿದರು. ನೀವಿಬ್ಬರು ಕ್ರೋಧ ಮತ್ತು ಮದ ಯೋನಿಯುಳ್ಳ ಪ್ರಾಣಗಳಾಗಿ ಹುಟ್ಟಿ ಎಂದು ಶಪಿಸಿದರು. ಆಗ ನಾನು 'ದಂತಿಲ' ಸಿಂಹನಾಗಿ, ಕೋಹಲನು ಆನೆಯಾಗಿ ಹುಟ್ಟಿದನು. ಬಹಳ ಪರಿಪರಿಯಾಗಿ ಅವರನ್ನು ಪ್ರಾರ್ಥಿಸಿದಾಗ ಅವರು ನಮಗೆ ಕೊಟ್ಟ ಶಾಪದಲ್ಲಿ ಈ ವಿಚಾರ ತಿಳಿಸಿದರು. ಶಂಖ ಎನ್ನುವ ಬ್ರಾಹ್ಮಣ ಒಬ್ಬ ದುಷ್ಠ ವ್ಯಾಧನಿಗೆ ವೈಶಾಖ ಮಾಸದ ಮಹತ್ವವನ್ನು ಹೇಳಬೇಕಾದಾಗ ನೀವಿಬ್ಬರು ಗಮನ ಕೊಟ್ಟು ಆಲಿಸಿರಿ. ಆಗ ನಿವು ಈ ಯೋನಿಯಿಂದ ಮುಕ್ತರಾಗಿ ಮತ್ತೆ ನನ್ನನ್ನೆ ಬಂದು ಸೇರುವಿರಿ ಎಂದರು. ಈಗ ನಾವಿಬ್ಬರೂ ನಿಮ್ಮ ಅನುಗ್ರಹದಿದಂದ ಮುಕ್ತರಾಗಿದ್ದೇವೆ. ನಾವು ಹೋಗಿ ಬರುತ್ತೇವೆ ಎಂದು ದಿವ್ಯವಾದ ದೇಹ, ಅದಕ್ಕೆ ಸುವಾಸನೆಯುತ ಗಂಧ ಲೇಪನ, ಇವೆಲ್ಲ ವೈಭವಗಳಿಂದ ಮುಕ್ತರಾಗಿ ಆ ದಂತಿಲ - ಕೋಹಲ, ಇಬ್ರು ಹೊರಟರು. ಈ ವಿಚಾರವನ್ನು ಶೃತದೇವನು, ಶೃತಕೀರ್ತಿ ಎಂಬ ರಾಜನಿಗೆ ಬೋಧಿಸಿದನು. ಇದು ಸ್ಕಂದ ಪುರಾಣದಲ್ಲಿ ಬಂದಿರುವ ವೈಶಾಖ ಮಾಸದ ಮಹತ್ವದ ವಿಚಾರವಾಗಿದೆ. ಆದ್ದರಿಂದ ಎಲ್ಲರು ಇದರ ಚಿಂತನೆಯನ್ನು ಅವಶ್ಯವಾಗಿ ಮಾಡಿ ಎಲ್ಲ ಪಾಪಗಳನ್ನು ಕಳೆದುಕೊಳ್ಳಬೇಕು.